ಗುಣಮಟ್ಟದ ಭರವಸೆ

  • ಒಕ್ಕೂಟವು ಗ್ರಾಹಕರ ಸಂತೃಪ್ತಿಗಾಗಿ ಸುರಕ್ಷಿತವಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪೂರೈಕೆ ಮಾಡಲು ಬದ್ದವಾಗಿದೆ.
  • ಅಂಗೀಕೃತ ಆಧುನಿಕ ತಂತ್ರಜ್ಞಾನ ಹಾಗೂ ಸೂಕ್ತಪದ್ದತಿಗಳನ್ನು ಹಾಲು ಸಂಸ್ಕರಣೆ, ಉತ್ಪಾದನೆ, ಪ್ಯಾಕಿಂಗ್ ಮತ್ತು ಪ್ರಾಮಾಣಿಕ ವಿತರಣೆ ಕಾರ್ಯಗಳಲ್ಲಿ ಅಳವಡಿಸಿಕೊಳ್ಳುವುದು.
  • ಆಹಾರ ಸರಪಳಿಯಲ್ಲಿ ಪಾಲ್ಗೊಳ್ಳುವ ಸರ್ವರ ಸಹಕಾರದಿಂದ ನಿರಂತರ ಸಂಪರ್ಕವನ್ನು ಹೊಂದಿ ಉತ್ತಮ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುವ ಪರಮೋಚ್ಚ ಧ್ಯೇಯವನ್ನು ಸಾಧಿಸುವುದು.
  • ಶಾಸನಬದ್ದ ಮತ್ತು ನಿರ್ವಹಣಾತ್ಮಕ ಅಗತ್ಯಗಳನ್ನು ಪಾಲಿಸುವ ಮೂಲಕ ನಿರ್ವಹಿಸಲು ಬದ್ದವಾಗಿದೆ.
  • ಈ ಬದ್ದತೆಯು ಅಳೆಯಬಲ್ಲ ಮಾನದಂಡಗಳ ಬೆಂಬಲಿತವಾಗಿದ್ದು, ಕಾಲಕಾಲಕ್ಕೆ ಸತತ ಅವಲೋಕನೆ ಹಾಗೂ ಪರಿಷ್ಕರಣೆಗೆ ಒಳಪಟ್ಟಿರುತ್ತದೆ.