ಗುಣಮಟ್ಟ ನೀತಿ

ನಮ್ಮ ಗುಣಮಟ್ಟದ ನೀತಿ

“ಕೋಮುಲ್”ಉತ್ತಮ ಗುಣಮಟ್ಟದ ಹಾಲನ್ನು ಶೇಖರಿಸಿ, ಸಂಸ್ಕರಿಸಿ ಮಾರುಕಟ್ಟೆಗೆ ವಿತರಣೆ ಮಾಡಲು ಬದ್ದವಾಗಿರುತ್ತದೆ.

“ಗೋವಿನಿಂದ ಗ್ರಾಹಕರಿಗೆ ಗುಣಮಟ್ಟದ ಉತ್ಕ್ರಷ್ಟತೆ” ಎಂಬ ಪರಿಕಲ್ಪನೆಯಡಿ ರೈತರಿಂದ ಸಂಗ್ರಹಿಸಲ್ಪಡುವ ಹಾಲನ್ನು ಕಲಬೆರೆಕೆಯಾಗದೇ ಮುಖ್ಯಡೇರಿಯಲ್ಲಿ ಸೂಕ್ಷ್ಮಾಣುಜೀವಿ ರಹಿತವಾಗಿ ಸಂಸ್ಕರಿಸಿ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ವಿತರಿಸಲಾಗುತ್ತಿದೆ. ಒಕ್ಕೂಟವು ಐ.ಎಸ್.ಓ  ಗುಣಮಟ್ಟ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದು, ಇದನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಬದ್ದವಾಗಿರುತ್ತದೆ.