ಮೌಲ್ಯಗಳು, ಧ್ಯೇಯೋದ್ದೇಶ ಮತ್ತು ಗುರಿ:

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ತನ್ನ ವ್ಯಾಪ್ತಿಯ ಸದಸ್ಯ ಸಂಘಗಳ ಹಾಲು ಉತ್ಪಾದಕರ ಸದಸ್ಯರುಗಳ ಆರ್ಥಿಕ ಮತ್ತು ಸಾಮಾಜಿಕ ಅಬಿವೃದ್ಧಿಗಾಗಿ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮ ಮಾಡಲು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾ, ಕಾರ್ಮಿಕರ ಸಂಘಟಿತ ಸೇವಾ ಸಮರ್ಪಣೆಯೊಂದಿಗೆ ಉತ್ಪಾದಕರಿಗೆ ಮತ್ತು ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವ ಧ್ಯೇಯದೊಂದಿಗೆ ಆರ್ಥಿಕವಾಗಿ ಪ್ರಗತಿ ಪಥದತ್ತ ಸಾಗಿ ರಾಷ್ಟ್ರಮಟ್ಟದಲ್ಲಿ ಉತ್ತಮ ಸ್ಥಾನಗಳಿಸಲು ಬದ್ದವಾಗಿರುತ್ತದೆ.

ಮೌಲ್ಯಗಳು

  • ಪ್ರಾಮಾಣಿಕತೆ
  • ಶಿಸ್ತು
  • ಗುಣಮಟ್ಟ
  • ಪರಿಶ್ರಮ
  • ಪಾರದರ್ಶಕ
  • ಪರಸ್ಪರ ಗೌರವ, ಸಹಕಾರ ಮತ್ತು ನಂಬಿಕೆ.

ಗುರಿಗಳು 2020

  • ಒಕ್ಕೂಟದ ವ್ಯಾಪ್ತಿಯಿಂದ ದಿನವಹಿ ಸರಾಸರಿ 20 ಲಕ್ಷ ಕೆಜಿ ಹಾಲು ಶೇಖರಣೆ.
  • ಎಲ್ಲಾ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಇಡೀ ಒಕ್ಕೂಟವನ್ನು ಸಂಪೂರ್ಣ ಗಣಕೀಕೃತಗೊಳಿಸುವುದು.
  • ಹಾಲು ಶೇಖರಣೆ ಮತ್ತು ಗುಣಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸುವುದು.