ಕೋಮುಲ್ ದಿ: 27.03.1987 ರಿಂದ 422 ಅಧಿಕೃತ ಸಂಘಗಳಿಂದ ರೂ. 8.56 ಲಕ್ಷಗಳ ಷೇರು ಬಂಡವಾಳದೊಂದಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಬೇರ್ಪಟ್ಟಿರುತ್ತದೆ.
1987 ರಲ್ಲಿ ಕೋಮುಲ್ ವ್ಯಾಪ್ತಿಯಲ್ಲಿ ಮೊಟ್ಟಮೊದಲ ಮಹಿಳಾ ಹಾ.ಉ.ಸ.ಸಂಘದ ಸ್ಥಾಪನೆ.
1989ರಲ್ಲಿ ಸಾದಲಿ ಶೀತಲ ಕೇಂದ್ರದ ಉದ್ಘಾಟನೆ.
1990ರಲ್ಲಿ ಹಾಲಿನ ಅಂತರಡೇರಿ ಮಾರಾಟಕ್ಕೆ ಚಾಲನೆ.
1991ರಲ್ಲಿ ಗೌರಿಬಿದನೂರು ಶೀತಲ ಕೇಂದ್ರದ ಉದ್ಘಾಟನೆ.
1994ರಲ್ಲಿ ಪೂರ್ಣ ಪ್ರಮಾಣದ0 ಲಕ್ಷ ಲೀ. ಸಾಮಥ್ರ್ಯದ ಸಂಸ್ಕರಣಾ ಘಟಕದ ಉದ್ಘಾಟನೆ.
1994ರಲ್ಲಿ ‘ನಂದಿನಿ’ ಬ್ರ್ಯಾಂಡ್‍ನಡಿಯಲ್ಲಿ ಸ್ಯಾಚೆಟ್ ಹಾಲಿನ ಮಾರಾಟ ಕಾರ್ಯಾರಂಭ.
1995ರಲ್ಲಿ ಡೇರಿ ಆವರಣದಲ್ಲಿ ಆಡಳಿತ ಕಟ್ಟಡದ ಉದ್ಘಾಟನೆ.
1998ರಲ್ಲಿ ಕೋಲಾರ ಡೇರಿಯಲ್ಲಿ ಚೀಸ್ ಉತ್ಪಾದನೆ ಘಟಕದ ಪ್ರಾರಂಭ.
1999ರಲ್ಲಿ ಕರ್ನಾಟಕದಲ್ಲೇ ಮೊಟ್ಟಮೊದಲಬಾರಿಗೆ ಪ್ರತಿಷ್ಟಿತ “ಗುಡ್‍ಲೈಫ್” ಬ್ರ್ಯಾಂಡಿನಡಿ ಗುಡ್‍ಲೈಫ್, ಸ್ಲಿಮ್, ಸ್ಮಾರ್ಟ್ ಮಾದರಿಯ ಯು.ಹೆಚ್.ಟಿ ಹಾಲಿನ ಉತ್ಪಾದನೆ ಹಾಗೂ ಮಾರಾಟ ಕಾರ್ಯಾರಂಭ.
1999ರಲ್ಲಿ ಚಿಂತಾಮಣಿ ಶೀತಲ ಕೇಂದ್ರದ ಹಾಲಿನ ಸಂಸ್ಕರಣಾ ಘಟಕದ ಸಾಮಥ್ರ್ಯ ವಿಸ್ತರಣೆ.
2000ರಲ್ಲಿ ತಮಿಳುನಾಡಿನಲ್ಲಿ ನಂದಿನಿ ಹಾಲಿನ ಮಾರುಕಟ್ಟೆ ಪ್ರಾರಂಭ.
2001ರಲ್ಲಿ ಕೋಮುಲ್‍ಗೆ ಐಸಿಒ-9002 ಗುಣಮಟ್ಟದ ಮಾನ್ಯತೆ.
2001ರಲ್ಲಿ ಅಮುಲ್‍ಗೆ ಮಸ್ತಿದಹಿ ಉತ್ಪಾದನೆ ಕಾರ್ಯಾರಂಭ.
2001ರಲ್ಲಿ ಯು.ಹೆಚ್.ಟಿ ಹಾಲಿನ ಸಂಸ್ಕರಣಾ ಘಟಕದ ವಿಸ್ತರಣೆ.
2002ರಲ್ಲಿ ‘ಟೈಫ್ಯಾಕ್’ ಪ್ರಾಜೆಕ್ಟ್‍ನ ಅಳವಡಿಕೆ.
2004ರಲ್ಲಿ0 ಲಕ್ಷ ಗಡಿದಾಡಿದ ಹಾಲು ಶೇಖರಣೆ.
2006ರಲ್ಲಿ ಡೇರಿ ಫಾರ್ಮರ್ಸ್ ವೆಲ್‍ಫೇರ್ ಟ್ರಸ್ಟ್‍ನ ಪ್ರಾರಂಭ.
2007ರಲ್ಲಿ40 ಲಕ್ಷ ಲೀ.ನಿಂದ 1.5 ಲಕ್ಷ ಲೀ./ದಿನ ಸಾಮಥ್ರ್ಯಕ್ಕೆ ಯು.ಹೆಚ್.ಟಿ ಘಟಕದ ವಿಸ್ತರಣೆ.
2008ರಲ್ಲಿ ಭಾರತದ ಗಡಿಯ ದೇಶ ಕಾಯುವ ಯೋಧರಿಗೆ ಗುಡ್‍ಲೈಫ್ ಹಾಲಿನ ಸರಬರಾಜು.
2008ರಲ್ಲಿ“ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ.,” ಎಂದು ಮರು ನಾಮಕರಣ.
2009ರಲ್ಲಿ ಗುಡ್‍ಲೈಫ್ 200ಮಿಲಿ ಫಿನೋ ಹಾಗೂ ನೂತನ ಮಾದರಿಯ ಸಂಪೂರ್ಣ ಹಾಲಿನ ಪರಿಚಯ.
2010ರಲ್ಲಿ ಗುಡ್‍ಲೈಫ್ ಹಾಲಿನ ಘಟಕದ ಸಾಮಥ್ರ್ಯವನ್ನು5 ಲಕ್ಷ ಲೀ./ದಿನ ವಿಸ್ತರಣೆ.
2010ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೆಗಾ ಡೇರಿ ಸ್ಥಾಪನೆ ಕಾರ್ಯಾರಂಭಗೊಂಡಿರುತ್ತದೆ.
2011ರಲ್ಲಿ5 ಲಕ್ಷ ಲೀ.ನಿಂದ 4.5 ಲಕ್ಷ ಲೀ./ದಿನ ಸಂಸ್ಕರಣಾ ಸಾಮಥ್ರ್ಯವನ್ನು ವಿಸ್ತರಣೆ.
2014ರಲ್ಲಿ ರಾಜ್ಯ ಸರ್ಕಾರದಿಂದ ಶ್ರೀನಿವಾಸಪುರದ ಬಳಿ 10 ಎಕರೆ ಜಾಗಹಸ್ತಾಂತರ.
2015ರಲ್ಲಿ ಮುಖ್ಯಡೇರಿಯಲ್ಲಿ ಶುದ್ದ ನೀರು ಘಟಕ (ಆರ್.ಒ) ಮತ್ತು ಮಲ್ಟಿಫ್ಯುಯಲ್ ಬಾಯ್ಲರ್ ಘಟಕ ಉದ್ಘಾಟನೆ.
2017ನೇ ಸಾಲಿನಲ್ಲಿ ಚೀಸ್ ಘಟಕದ ಉತ್ಪಾದನ ಸಾಮಥ್ಯವನ್ನು 2 MT ನಿಂದ 5 MT ಗೆ ಹೆಚ್ಚಿಸಲಾಯಿತು.
2017ನೇ ಸಾಲಿನಲ್ಲಿ ಒಕ್ಕೂಟದ ಮುಖ್ಯ ಡೇರಿಯಲ್ಲಿ “ಮೈಸೂರ್ ಪಾಕ್” ಉತ್ಪಾದನೆ ಕೈಗೊಳ್ಳಲಾಯಿತು.
2017ನೇ ಸಾಲಿನಲ್ಲಿ 1600 KVA ಸಾಮಥ್ರ್ಯದ ನೂತನ Transformer ಅನ್ನು ಮುಖ್ಯ ಡೇರಿಯಲ್ಲಿ ಕಾರ್ಯರಂಭ ಮಾಡಲಾಗಿದೆ.
2017ನೇ ಸಾಲಿನಲ್ಲಿ ಶ್ರೀನಿವಾಸಪುರದ ಪಣಸಮಾಕನಹಳ್ಳಿಯಲ್ಲಿ ಒಕ್ಕೂಟದ 10 ಎಕರೆ ಜಾಗದಲ್ಲಿ ” Automated Corrugated box Manufacturing unit ” ಗೆ ಶೀಲಾನ್ಯಾಸ ಮಾಡಲಾಯಿತು.
2018ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರದ ಮೆಗಾಡೇರಿಯಲ್ಲಿ ಆಗಸ್ಟ್’2018ರ ಮಾಹೆಯಿಂದ ಯು.ಹೆಚ್.ಟಿ. ಹಾಲಿನ 180ಮಿಲಿ ಮತ್ತು 500ಮಿಲಿ ನೂತನ “ಫ್ಲೆಕ್ಸಿ ಪ್ಯಾಕ್” ಉತ್ಪಾದನೆ ಪ್ರಾರಂಭಿಸಲಾಗಿದ್ದು, ಪ್ರತಿ ನಿತ್ಯ 20 ಸಾವಿರ ಲೀ. ಹಾಲನ್ನು ಮಾರುಕಟ್ಟೆಗೆ ಒದಗಿಸಲಾಗುತ್ತಿದೆ.
2018ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರದ ಮೆಗಾಡೇರಿಯಲ್ಲಿ ಆಗಸ್ಟ್’2018ರ ಮಾಹೆಯಿಂದ ಯು.ಹೆಚ್.ಟಿ. ಹಾಲಿನ 500 ಮಿಲಿ ಮತ್ತು 1000ಮಿಲಿ. “ಟೆಟ್ರಾ ಬ್ರಿಕ್” ಹಾಲಿನ ಉತ್ಪಾದನೆ ಪ್ರಾರಂಭಿಸಲಾಗಿದ್ದು, ಪ್ರತಿ ನಿತ್ಯ1.0 ಲಕ್ಷ ಲೀ. ಹಾಲನ್ನು ಮಾರುಕಟ್ಟೆಗೆ ಒದಗಿಸಲಾಗುತ್ತಿದೆ.
2018ನೇ ಸಾಲಿನಲ್ಲಿ ನೆರೆಯ ಆಂದ್ರಪ್ರದೇಶ ರಾಜ್ಯದ ವಿಜಯವಾಡ ವ್ಯಾಪ್ತಿಯಲ್ಲಿ ನಂದಿನಿ ಹಾಲು ಮತ್ತು ಮೊಸರು ಕೊ-ಪ್ಯಾಕಿಂಗ್ ಮಾಡಿಸಿ ಮಾರಾಟ ಕೈಗೊಳ್ಳಲು ಕ್ರಮವಿಡಲಾಗಿದೆ.