1994-95ನೇ ಸಾಲಿನಲ್ಲಿ ದೇಶದಲ್ಲೇ ಮೊದಲಬಾರಿಗೆ “ಆಪರೇಷನ್ ಥೈಲೇರಿಯಾಸಿಸ್” ಕಾರ್ಯಕ್ರಮದ ಅನುಷ್ಟಾನ.
1999ರಲ್ಲಿ ಕರ್ನಾಟಕ ರಾಜ್ಯದಲ್ಲೇ ಮೊದಲಬಾರಿಗೆ ಟೆಟ್ರಾಪ್ಯಾಕ್ ಯು.ಹೆಚ್.ಟಿ ಹಾಲಿನ ಘಟಕವನ್ನು ಪ್ರಾರಂಭಿಸಿದ ಹಿರಿಮೆ
2001ರಲ್ಲಿ ರಾಜ್ಯದಲ್ಲೇ ಮೊದಲಬಾರಿಗೆ “ಸ್ವಯಂಚಾಲಿತ ಹಾಲು ಶೇಖರಣೆ ಘಟಕ” ಪ್ರಾರಂಭ ಹಾಗೂ ಪ್ರಸ್ತುತ ಅತಿ ಹೆಚ್ಚು ಅಂದರೆ 145 ಬಿಎಂಸಿ ಕೇಂದ್ರಗಳನ್ನು ಹೊಂದಿರುವ ಏಕೈಕ ಒಕ್ಕೂಟ ಎಂಬ ಹಿರಿಮೆ.
2001ರಲ್ಲಿ ಚಿಂತಾಮಣಿ ಶೀಥಲ ಕೇಂದ್ರ ಆವರಣದಲ್ಲಿ “ಪ್ರಾಣಿರೋಗ ಪತ್ತೆ ಪ್ರಯೋಗಾಲಯ” ಪ್ರಾರಂಭ.
2002-03ನೇ ಸಾಲಿನಲ್ಲಿ ದೇಶದಲ್ಲೇ ಮೊದಲಬಾರಿಗೆ “ಸಮೂಹ ಹಾಲು ಕರೆಯುವ ಘಟಕ” ಪರಿಕಲ್ಪನೆ.
2003-04ನೇ ಸಾಲಿನಲ್ಲಿ ರಾಜ್ಯದಲ್ಲೇ ಮೊದಲಬಾರಿಗೆ “ಶುದ್ದ ಹಾಲು ಉತ್ಪಾದನೆ” ಕಾರ್ಯಕ್ರಮದ ಪರಿಕಲ್ಪನೆ ಹಾಗೂ ಅನುಷ್ಟಾನ.
2003-04ನೇ ಸಾಲಿನಲ್ಲಿ ರಾಜ್ಯದಲ್ಲೇ ಮೊದಲಬಾರಿಗೆ ಪಶು ಸಂಗೋಪನೆ ಇಲಾಖೆಯೊಂದಿಗೆ ಜಂಟಿಯಾಗಿ ಜಾನುವಾರುಗಳಿಗೆ “ಸಮೂಹ ಕಾಲುಬಾಯಿ ಜ್ವರ ಲಸಿಕೆ” ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು.
2006ರಲ್ಲಿ “ಹಾಲು ಉತ್ಪಾದಕರ ವೆಲ್‍ಫೇರ್ ಟ್ರಸ್ಟ್” ಪ್ರಾರಂಭ
28/08/2020 ರಲ್ಲಿ ದಾಖಲೆಯ 7.33 ಲಕ್ಷ ಲೀ. ಯು.ಹೆಚ್.ಟಿ ಹಾಲು ಮಾರಾಟವಾಗಿದೆ.
11/03/2020 ರಲ್ಲಿ ದಾಖಲೆಯ 3.71 ಲಕ್ಷ ಲೀ. ಸ್ಯಾಚೆಟ್ ಹಾಲು ಮಾರಾಟವಾಗಿದೆ.
19/06/2018 ರಲ್ಲಿ ದಾಖಲೆಯ 11.64 ಲಕ್ಷ ಲೀ. ಹಾಲು ಸಂಗ್ರಹಿಸಲಾಗಿದೆ.
ಪ್ರಶಸ್ತಿಗಳು
2001ರಲ್ಲಿ ಕೋಮುಲ್‍ಗೆ ಗುಣಮಟ್ಟದಲ್ಲಿ ಐಎಸ್‍ಒ-9002 ಲಭ್ಯವಾಯಿತು.
2003ರಲ್ಲಿ “ನ್ಯಾಷನಲ್ ಪ್ರೊಡೆಕ್ಟಿವಿಟಿ ಕೌನ್ಸಿಲ್” ನಿಂದ 2ನೇ ಸ್ಥಾನ.
2004ರಲ್ಲಿ “ನ್ಯಾಷನಲ್ ಪ್ರೊಡೆಕ್ಟಿವಿಟಿ ಕೌನ್ಸಿಲ್” ನಿಂದ 2ನೇ ಸ್ಥಾನ.
2006ರಲ್ಲಿ ರಾಜ್ಯ ಸರ್ಕಾರದಿಂದ “ಉತ್ತಮ ಸಹಕಾರ ಒಕ್ಕೂಟ” ಪ್ರಶಸ್ತಿ.
2008ರಲ್ಲಿ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದ “ಎನರ್ಜಿ ಕನ್ಸರ್ವೇಷನ್ ಅವಾರ್ಡ್”.
2009ರಲ್ಲಿ “ನ್ಯಾಷನಲ್ ಎನರ್ಜಿ ಅವಾರ್ಡ್”ನಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲನೇ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ ಎರಡನೇ ಸ್ಥಾನ.
ಕೋಲಾರ ನಗರದಲ್ಲಿ ಅದ್ದೂರಿಯಾಗಿ ನಡೆಯುವ ‘ಕನ್ನಡ ರಾಜ್ಯೋತ್ಸವ’ದ ಮೆರವಣಿಗೆಯಲ್ಲಿ ಕೋಮುಲ್ ಸ್ತಭ್ದಚಿತ್ರಕ್ಕೆ ತಲಾ 2009, 2010 ಹಾಗೂ 2011ರ ಸಾಲಿನಲ್ಲಿ 2ನೇ ಬಹುಮಾನ.
2017ರ ಸಾಲಿನಲ್ಲಿ ಒಕ್ಕೂಟಕ್ಕೆ “Quality Mark ” ಪ್ರಶಸ್ತಿಯನ್ನು NDDB ಮತ್ತು ಕ್ರೇಂದ್ರ ಸರ್ಕಾರದಿಂದ ನೀಡಿ ಗೌರವಿಸಲಾಯಿತು.