ಕೆಲವು ಖಾಸಗಿ ಡೇರಿಗಳು ಮತ್ತು ಹಾಲು ಮಾರಾಟಗಾರರು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅನೈತಿಕ ವ್ಯಾಪಾರ ಪದ್ದತಿಗಳನ್ನು ಆಶ್ರಯಿಸಿದ್ದಾರೆ. ಅವುಗಳೆಂದರೆ:

  1. ಹಾಲು ಕೆಡದಿರಲು ಮತ್ತು ಗಟ್ಟಿಯಾಗಿರಲು ಕಾರ್ನ್‍ಫ್ಲೋರ್, ಕಾರ್ಬೋಜಿ ಮೀಥೈಲ್ ಸೆಲ್ಯೂಲೋಸ್, ಗಮ್‍ಪೌಡರ್ ಮುಂತಾದ ಹಾನಿಕಾರಕ ಪದಾರ್ಥಗಳನ್ನು ಬೆರೆಸುತ್ತಾರೆ. ಇಂತಹ ಹಾಲಿನ ಸೇವನೆ ಆರೋಗ್ಯಕ್ಕೆ ಹಾನಿಕಾರಕ.
  2. ಖಾಸಗಿ ಹಾಲು ಸರಬರಾಜು ಬಹುಪಾಲು ನೆರೆಯ ರಾಜ್ಯಗಳಿಂದ (ಅಂದರೆ ಸುಮಾರು 300-500ಕೀಮಿ) ಆಗುತ್ತದೆ. ಇಷ್ಟು ದೂರದಿಂದ ಬರುವ ಹಾಲು ಹಾಳಾಗುವುದನ್ನು ತಪ್ಪಿಸಲು ಖಾಸಗಿಯವರು ಹೈಡ್ರೋಜನ್ ಪೆರಾಕ್ಸೈಡ್, ವಾಷಿಂಗ್ ಸೋಡಾ, ಕಾಸ್ಟಿಕ್ ಸೋಡಾ ಮತ್ತು ಪ್ರತಿಜೀವಕಗಳಂತಹ ಹಾನಿಕಾರಕ ಸಂರಕ್ಷಕವನ್ನು ಬೆರೆಸುತ್ತಾರೆ. ಇದು ಆಹಾರ ಕಲಬೆರೆಕೆ ಕಾಯ್ದೆಗೆ ವಿರುದ್ದವಾಗಿರುವುದಲ್ಲದೇ ಗ್ರಾಹಕರ ಆರೋಗ್ಯಕ್ಕೆ ತೀವ್ರ ಹಾನಿಕಾರಕವಾಗಿದೆ.