ಸಹಕಾರಿ ತತ್ವಗಳಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಂಘಗಳ ರಚನೆಯಿಂದ ಹೈನೋದ್ಯಮವನ್ನು ಉತ್ತೇಜಿಸುವುದು.
ಉತ್ಪಾದಕರ ಹೈನು ರಾಸುಗಳಿಗೆ ಎಲ್ಲಾ ರೀತಿಯ ತಾಂತ್ರಿಕ ಸೌಲಭ್ಯ ಒದಗಿಸುವುದಲ್ಲದೇ ಅತ್ಯಾಧುನಿಕ ತಂತ್ರಾಜ್ಞಾನದಿಂದ ಹೈನೋದ್ಯಮ ಕೈಗೊಳ್ಳುವ ಬಗ್ಗೆ ಸೂಕ್ತ ತರಬೇತಿ ನೀಡಿ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಗೆ ಉತ್ತೇಜಿಸುವುದಲ್ಲದೇ ಎಲ್ಲಾ ಉತ್ಪಾದಕರಿಗೆ ವರ್ಷಪೂರ್ತಿ ಉತ್ತಮ ಬೆಲೆ ನೀಡಿ ಹಿತ ಕಾಪಾಡುವುದು.
ಹೈನುರಾಸುಗಳಿಗೆ ಒಕ್ಕೂಟ ವತಿಯಿಂದ ಕೃತಕ ಗರ್ಭಧಾರಣೆ, ಫಲಪರೀಕ್ಷೆ, ಬಂಜೆತನ ನಿವಾರಣಾ ಶಿಬಿರ, ಸಾಮೂಹಿಕ ಲಸಿಕೆ (ಕಾಲು ಬಾಯಿ ಜ್ವರ ಮತ್ತು ಥೈಲೇರಿಯಾ) ಕಾರ್ಯಗಳನ್ನು ಆಯೋಜಿಸುವುದಲ್ಲದೇ ರಿಯಾಯ್ತಿ ದರದಲ್ಲಿ ರಾಸುಗಳಿಗೆ ಸಮತೋಲನ ಪಶು ಆಹಾರವನ್ನು ನಿರಂತರವಾಗಿ ಸಂಘಗಳಿಗೆ ತಲುಪಿಸುವುದು.
ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗಿಗಳು ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಡೆದು ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ ಸ್ವ-ಉದ್ಯೋಗ ಕೈಗೊಳ್ಳಲು ಉತ್ತೇಜಿಸುವುದು.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸಂಘದ ಆಡಳಿತ ಮಂಡಲಿ ಹಾಗೂ ಉತ್ಪಾದಕರೇ ಸಂಘಗಳನ್ನು ನಡೆಸುವುದು.
ಪಟ್ಟಣ ಪ್ರದೇಶದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪೂರೈಸುವುದು.