ತರಬೇತಿ

ಕರ್ನಾಟಕ ಹಾಲು ಮಹಾ ಮಂಡಳಿ (ಕೆ.ಎಂ.ಎಫ್), ಬೆಂಗಳೂರು ವತಿಯಿಂದ ಎಲ್ಲಾ ಒಕ್ಕೂಟಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಲಿ ಮತ್ತು ಸಿಬ್ಬಂದಿಗಳಿಗೆ, ಹಾಲು ಉತ್ಪಾದಕರಿಗೆ ಮತ್ತು ಒಕ್ಕೂಟದ ಕ್ಷೇತ್ರಾಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ.

ತರಬೇತಿಗಳು:

  • ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳು.
  • ಶೇಖರಣೆ ಮತ್ತು ತಾಂತ್ರಿಕ.
  • ಮಾನವ ಸಂಪನ್ಮೂಲ ಅಭಿವೃದ್ದಿ

ಪ್ರಾಥಮಿಕ ಹಾ.ಉ.ಸ.ಸಂಘ ಸಿಬ್ಬಂದಿಗಳಿಗೆ ನೀಡಲಾಗುವ ತರಬೇತಿಗಳು:

  • ಸಂಘದ ಆಡಳಿತ ಮಂಡಲಿ ಸದಸ್ಯರಿಗೆ ತರಬೇತಿ.
  • ಸಂಘದ ಮುಖ್ಯ ಕಾರ್ಯನಿರ್ವಾಹಕರ ತರಬೇತಿ.
  • ಪ್ರಥಮ ಚಿಕಿತ್ಸೆ.
  • ಪಶು ಆರೋಗ್ಯ ನಿರ್ವಹಣೆ .
  • ಶುದ್ದ ಹಾಲು ಉತ್ಪಾದನೆ.
  • ಕೃತಕ ಗರ್ಭಧಾರಣೆ .
  • ಬಿಎಂಸಿ ಮತ್ತು ಎಎಂಸಿಯು

ಶೇಖರಣೆ ಮತ್ತು ತಾಂತ್ರಿಕ

  • ಒಕ್ಕೂಟದ ಕ್ಷೇತ್ರಾಧಿಕಾರಿಗಳಿಗೆ ಪ್ರಾಥಮಿಕ ಸಹಕಾರ ಸಂಘಗಳ ನಿಯಮಕಾಲಿಕ ವಿಮರ್ಶೆ ಸಭೆಗಳ ಆಯೋಜನೆ, ಹಾಲಿನ ಗುಣಮಟ್ಟ ಪರೀಕ್ಷೆ, ಸಂಘದ ಖಾತೆಗಳ ನಿರ್ವಹಣೆ, ಪಶು ಆರೋಗ್ಯ ಮತ್ತು ಆರೈಕೆ, ಶುದ್ದ ಹಾಲು ಉತ್ಪಾದನೆ ಕುರಿತಾದ ತರಬೇತಿ ನೀಡಲಾಗುತ್ತದೆ.

ಮಾನವ ಸಂಪನ್ಮೂಲ ಅಭಿವೃದ್ದಿ

  • ಒಕ್ಕೂಟದ ವಿವಿಧ ವಿಭಾಗಗಳ ನೌಕರರು ಮತ್ತು ಅಧಿಕಾರಿಗಳಿಗೆ ಉತ್ಪಾದನೆ, ಕಾರ್ಯಾಚರಣೆ, ಯಂತ್ರೋಪಕರಣ / ಶೈತ್ಯೀಕರಣ, ಇಂಧನ ಸಂರಕ್ಷಣೆ, ಗುಣಮಟ್ಟ ನಿಯಂತ್ರಣ, ಆಹಾರ ಮತ್ತು ಸುರಕ್ಷತಾ ಕಾಯ್ದೆ ಸೇರಿದಂತೆ ವಿವಿಧ ಮಾದರಿಯ ಪ್ರೇರೇಪಣಾ ತರಬೇತಿಗಳನ್ನು ನೀಡಲಾಗುತ್ತಿದೆ.