ಹಾಲಿನ ವೈಶಿಷ್ಟ್ಯ
ಹಾಲು ಬಹುತೇಕ ಸಂಪೂರ್ಣ ಆಹಾರವಾಗಿದ್ದು, ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿದೆ. ಹಾಲು ನಮ್ಮ ದೇಹ ನಿರ್ಮಾಣಕ್ಕೆ ಅವಶ್ಯವಿರುವ ಪ್ರೋಟೀನ್‍ಗಳು, ಶಕ್ತಿಯನ್ನು ನೀಡುವ ಲ್ಯಾಕ್ಟೋಸ್ ಮತ್ತು ಮೂಳೆಗಳನ್ನು ಬಲಪಡಿಸುವ ಖನಿಜಗಳು ಮತ್ತು ಜೀವಸತ್ವಗಳನ್ನು ಒದಗಿಸುತ್ತದೆ. ಈ ಎಲ್ಲಾ ಪೋಷಕಾಂಶಗಳು ಹಾಲಿನಲ್ಲಿ ಸುಲಭವಾಗಿ ಜೀರ್ಣವಾಗುವ ಮತ್ತು ಜೋಡಿಸಬಹುದಾದ ರೂಪದಲ್ಲಿ ಇರುತ್ತವೆಯಾದ್ದರಿಂದ ಇದು ಬಹಳ ಮುಖ್ಯವಾದ ಆಹಾರವಾಗಿದ್ದು, ವಿಶೇಷವಾಗಿ ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ, ಅನಾರೋಗ್ಯ ಪೀಡಿತರಿಗೆ ಮತ್ತು ವಯಸ್ಸಾದವರಿಗೆ ಹಾಲಿನ ಸೇವನೆಯು ಬಹುಮುಖ್ಯವಾಗಿರುತ್ತದೆ.
ಹಾಲು ನೀರು, ಕೊಬ್ಬು ಮತ್ತು ಘನಕೊಬ್ಬು (ಎಸ್‍ಎನ್‍ಎಫ್) ಅನ್ನು ಒಳಗೊಂಡಿದ್ದು, ಕೊಬ್ಬು ಮತ್ತು ಎಸ್‍ಎನ್‍ಎಫ್ ಸರಿಯಾದ ಪ್ರಮಾಣದಲ್ಲಿದ್ದಾಗ ಹಾಲು ಪೌಷ್ಟಿಕಾಂಶವನ್ನು ಸಮತೋಲನಗೊಳಿಸುತ್ತದೆ. ಎಸ್‍ಎನ್‍ಎಫ್ ಪ್ರೋಟೀನ್‍ಗಳು, ಲ್ಯಾಕ್ಟೋಸ್ ಮತ್ತು ಖನಿಜಗಳಿಂದ ಕೂಡಿದ್ದು, ಸಾಮಾನ್ಯ ಹಸುವಿನ ಹಾಲು ಸುಮಾರು 4% ಕೊಬ್ಬು ಮತ್ತು 8.5% ಎಸ್‍ಎನ್‍ಎಫ್ ಅನ್ನು ಹೊಂದಿದ್ದರೆ ಎಮ್ಮೆ ಹಾಲಿನಲ್ಲಿ ಸುಮಾರು 7% ಕೊಬ್ಬು ಮತ್ತು 9% ಎಸ್‍ಎನ್‍ಎಫ್ ಇರುತ್ತದೆ.
ಸರಾಸರಿ ದೈನಂದಿನ ಮಾನವ ಅವಶ್ಯಕತೆಗಳಲ್ಲಿ ಒಂದು ಲೋಟ ಹಾಲು (ಸುಮಾರು 200ಮಿಲಿ) ಈ ಕೆಳಗಿನ ಪೋಷಕಾಂಶಗಳನ್ನು ಒದಗಿಸುತ್ತದೆ.
16% ಪ್ರೋಟೀನ್‍ಗಳು, 30% ಕ್ಯಾಲ್ಸಿಯಂ, 11% ಪೊಟ್ಯಾಸಿಯಂ, 20% ರಿಬೋಫ್ಲಾವಿನ್, 13% ವಿಟಮಿನ್ ಬಿ-12 ಮತ್ತು 25% ವಿಟಮಿನ್-ಡಿ ಇರುತ್ತದೆ.
ಮಾಡಬೇಕಾದದ್ದು:
- ಬಳಸುವವರೆಗೆ ಹಾಲನ್ನು ರೆಫ್ರಿಜರೇಟರ್‍ನಲ್ಲಿ ಇರಿಸಿ.
- ಹಾಲನ್ನು ಬಳಸುವ ಮೊದಲು ಹಾಲಿನ ಪ್ಯಾಕೆಟ್ ಅನ್ನು ಶುದ್ದ ನೀರಿನಲ್ಲಿ ತೊಳೆಯಿರಿ.
- ಹಾಲು ಬಳಕೆಗೆ 30 ನಿಮಿಷಗಳ ಮೊದಲು ರೆಫ್ರಿಜರೇಟರ್‍ನಿಂದ ಹೊರತೆಗೆಯಬೇಕು.
- ಹಾಲನ್ನು ಬಿಸಿ ಮಾಡಲು ಶುದ್ದವಾದ ಪ್ರತ್ಯೇಕ ಪಾತ್ರೆಯನ್ನು ಬಳೆಸತಕ್ಕದ್ದು.
- ಹಾಲು ಈಗಾಗಲೇ ಪ್ಯಾಶ್ಚರೀಕರಿಸಿರುವುದರಿಂದ ಹೆಚ್ಚು ಕುದಿಸುವ ಅವಶ್ಯಕತೆ ಇರುವುದಿಲ್ಲ.
- ರೆಫ್ರಿಜರೇಟರ್ ಇಲ್ಲದಿದ್ದಲ್ಲಿ, ಹಾಲನ್ನು ಬಿಸಿ ಮಾಡಿ ತಣ್ಣೀರು ಇರುವ ಇನ್ನೊಂದು ಪಾತ್ರೆಯಲ್ಲಿ ಇರಿಸಿ. ಪ್ರತಿ 6-7 ಘಂಟೆಗಳಿಗೊಮ್ಮೆ ಹಾಲನ್ನು ಬಿಸಿ ಮಾಡುವುದು ಉತ್ತಮ.
ಮಾಡಬಾರದ್ದು:
- ಹಾಲಿನ ಪ್ಯಾಕೆಟ್ ಖರೀದಿಸಿದ ಘಂಟೆಗಳ ನಂತರ ಹಾಲನ್ನು ರೆಫ್ರಿಜರೇಟರ್‍ನಲ್ಲಿ ಇಡುವುದು.
- ಹಾಲಿನ ಪಾತ್ರೆಗಳನ್ನು ಇತರೆ ಉದ್ದೇಶಗಳಿಗೆ ಬಳಸುವುದು.
- ಹಾಲಿನ ಪ್ಯಾಕೆಟ್ ಅನ್ನು ಶುದ್ದ ನೀರಿನಲ್ಲಿ ತೊಳೆಯದ ಪಾತ್ರೆಗೆ ಸುರಿಯುವುದು.
- ರೆಫ್ರಿಜರೇಟರ್‍ನಿಂದ ಹಾಲಿನ ಪ್ಯಾಕೆಟ್ ತೆಗೆದ ತಕ್ಷಣ ಹೆಚ್ಚಿನ ಜ್ವಾಲೆಯಲ್ಲಿ ಕುದಿಸುವುದು.
- ಹಾಲನ್ನು ಹೆಚ್ಚು ಹೊತ್ತ ಕುದಿಸುವುದು. ಇದರಿಂದ ಹಾಲಿನಲ್ಲಿರುವ ಪ್ರೋಟೀನ್‍ಗಳು ನಾಶವಾಗುತ್ತದೆ.
- ಹಾಲಿನ ಪ್ಯಾಕೆಟ್‍ಗಳನ್ನು ಸೂರ್ಯನ ನೇರ ಕಿರಣಗಳಿಗೆ ಒಡ್ಡುವುದು