ಕೋಮುಲ್ ಸಾಗಿ ಬಂದ ಹಾದಿ

 • ಕೋಮುಲ್ ದಿ: 27.03.1987 ರಿಂದ 422 ಅಧಿಕೃತ ಸಂಘಗಳಿಂದ ರೂ. 8.56 ಲಕ್ಷಗಳ ಷೇರು ಬಂಡವಾಳದೊಂದಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಬೇರ್ಪಟ್ಟಿರುತ್ತದೆ.
 • 1987 ರಲ್ಲಿ ಕೋಮುಲ್ ವ್ಯಾಪ್ತಿಯಲ್ಲಿ ಮೊಟ್ಟಮೊದಲ ಮಹಿಳಾ ಹಾ.ಉ.ಸ.ಸಂಘದ ಸ್ಥಾಪನೆ.
 • 1989ರಲ್ಲಿ ಸಾದಲಿ ಶೀತಲ ಕೇಂದ್ರದ ಉದ್ಘಾಟನೆ.
 • 1990ರಲ್ಲಿ ಹಾಲಿನ ಅಂತರಡೇರಿ ಮಾರಾಟಕ್ಕೆ ಚಾಲನೆ.
 • 1991ರಲ್ಲಿ ಗೌರಿಬಿದನೂರು ಶೀತಲ ಕೇಂದ್ರದ ಉದ್ಘಾಟನೆ.
 • 1994ರಲ್ಲಿ ಪೂರ್ಣ ಪ್ರಮಾಣದ0 ಲಕ್ಷ ಲೀ. ಸಾಮಥ್ರ್ಯದ ಸಂಸ್ಕರಣಾ ಘಟಕದ ಉದ್ಘಾಟನೆ.
 • 1994ರಲ್ಲಿ ‘ನಂದಿನಿ’ ಬ್ರ್ಯಾಂಡ್‍ನಡಿಯಲ್ಲಿ ಸ್ಯಾಚೆಟ್ ಹಾಲಿನ ಮಾರಾಟ ಕಾರ್ಯಾರಂಭ.
 • 1995ರಲ್ಲಿ ಡೇರಿ ಆವರಣದಲ್ಲಿ ಆಡಳಿತ ಕಟ್ಟಡದ ಉದ್ಘಾಟನೆ.
 • 1998ರಲ್ಲಿ ಕೋಲಾರ ಡೇರಿಯಲ್ಲಿ ಚೀಸ್ ಉತ್ಪಾದನೆ ಘಟಕದ ಪ್ರಾರಂಭ.
 • 1999ರಲ್ಲಿ ಕರ್ನಾಟಕದಲ್ಲೇ ಮೊಟ್ಟಮೊದಲಬಾರಿಗೆ ಪ್ರತಿಷ್ಟಿತ “ಗುಡ್‍ಲೈಫ್” ಬ್ರ್ಯಾಂಡಿನಡಿ ಗುಡ್‍ಲೈಫ್, ಸ್ಲಿಮ್, ಸ್ಮಾರ್ಟ್ ಮಾದರಿಯ ಯು.ಹೆಚ್.ಟಿ ಹಾಲಿನ ಉತ್ಪಾದನೆ ಹಾಗೂ ಮಾರಾಟ ಕಾರ್ಯಾರಂಭ.
 • 1999ರಲ್ಲಿ ಚಿಂತಾಮಣಿ ಶೀತಲ ಕೇಂದ್ರದ ಹಾಲಿನ ಸಂಸ್ಕರಣಾ ಘಟಕದ ಸಾಮಥ್ರ್ಯ ವಿಸ್ತರಣೆ.
 • 2000ರಲ್ಲಿ ತಮಿಳುನಾಡಿನಲ್ಲಿ ನಂದಿನಿ ಹಾಲಿನ ಮಾರುಕಟ್ಟೆ ಪ್ರಾರಂಭ.
 • 2001ರಲ್ಲಿ ಕೋಮುಲ್‍ಗೆ ಐಸಿಒ-9002 ಗುಣಮಟ್ಟದ ಮಾನ್ಯತೆ.
 • 2001ರಲ್ಲಿ ಅಮುಲ್‍ಗೆ ಮಸ್ತಿದಹಿ ಉತ್ಪಾದನೆ ಕಾರ್ಯಾರಂಭ.
 • 2001ರಲ್ಲಿ ಯು.ಹೆಚ್.ಟಿ ಹಾಲಿನ ಸಂಸ್ಕರಣಾ ಘಟಕದ ವಿಸ್ತರಣೆ.
 • 2002ರಲ್ಲಿ ‘ಟೈಫ್ಯಾಕ್’ ಪ್ರಾಜೆಕ್ಟ್‍ನ ಅಳವಡಿಕೆ.
 • 2004ರಲ್ಲಿ0 ಲಕ್ಷ ಗಡಿದಾಡಿದ ಹಾಲು ಶೇಖರಣೆ.
 • 2006ರಲ್ಲಿ ಡೇರಿ ಫಾರ್ಮರ್ಸ್ ವೆಲ್‍ಫೇರ್ ಟ್ರಸ್ಟ್‍ನ ಪ್ರಾರಂಭ.
 • 2007ರಲ್ಲಿ40 ಲಕ್ಷ ಲೀ.ನಿಂದ 1.5 ಲಕ್ಷ ಲೀ./ದಿನ ಸಾಮಥ್ರ್ಯಕ್ಕೆ ಯು.ಹೆಚ್.ಟಿ ಘಟಕದ ವಿಸ್ತರಣೆ.
 • 2008ರಲ್ಲಿ ಭಾರತದ ಗಡಿಯ ದೇಶ ಕಾಯುವ ಯೋಧರಿಗೆ ಗುಡ್‍ಲೈಫ್ ಹಾಲಿನ ಸರಬರಾಜು.
 • 2008ರಲ್ಲಿ“ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ.,” ಎಂದು ಮರು ನಾಮಕರಣ.
 • 2009ರಲ್ಲಿ ಗುಡ್‍ಲೈಫ್ 200ಮಿಲಿ ಫಿನೋ ಹಾಗೂ ನೂತನ ಮಾದರಿಯ ಸಂಪೂರ್ಣ ಹಾಲಿನ ಪರಿಚಯ.
 • 2010ರಲ್ಲಿ ಗುಡ್‍ಲೈಫ್ ಹಾಲಿನ ಘಟಕದ ಸಾಮಥ್ರ್ಯವನ್ನು5 ಲಕ್ಷ ಲೀ./ದಿನ ವಿಸ್ತರಣೆ.
 • 2010ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೆಗಾ ಡೇರಿ ಸ್ಥಾಪನೆ ಕಾರ್ಯಾರಂಭಗೊಂಡಿರುತ್ತದೆ.
 • 2011ರಲ್ಲಿ5 ಲಕ್ಷ ಲೀ.ನಿಂದ 4.5 ಲಕ್ಷ ಲೀ./ದಿನ ಸಂಸ್ಕರಣಾ ಸಾಮಥ್ರ್ಯವನ್ನು ವಿಸ್ತರಣೆ.
 • 2014ರಲ್ಲಿ ರಾಜ್ಯ ಸರ್ಕಾರದಿಂದ ಶ್ರೀನಿವಾಸಪುರದ ಬಳಿ 10 ಎಕರೆ ಜಾಗಹಸ್ತಾಂತರ.
 • 2015ರಲ್ಲಿ ಮುಖ್ಯಡೇರಿಯಲ್ಲಿ ಶುದ್ದ ನೀರು ಘಟಕ (ಆರ್.ಒ) ಮತ್ತು ಮಲ್ಟಿಫ್ಯುಯಲ್ ಬಾಯ್ಲರ್ ಘಟಕ ಉದ್ಘಾಟನೆ.
 • 2017ನೇ ಸಾಲಿನಲ್ಲಿ ಚೀಸ್ ಘಟಕದ ಉತ್ಪಾದನ ಸಾಮಥ್ಯವನ್ನು 2 MT ನಿಂದ 5 MT ಗೆ ಹೆಚ್ಚಿಸಲಾಯಿತು.
 • 2017ನೇ ಸಾಲಿನಲ್ಲಿ ಒಕ್ಕೂಟದ ಮುಖ್ಯ ಡೇರಿಯಲ್ಲಿ “ಮೈಸೂರ್ ಪಾಕ್” ಉತ್ಪಾದನೆ ಕೈಗೊಳ್ಳಲಾಯಿತು.
 • 2017ನೇ ಸಾಲಿನಲ್ಲಿ 1600 KVA ಸಾಮಥ್ರ್ಯದ ನೂತನ Transformer ಅನ್ನು ಮುಖ್ಯ ಡೇರಿಯಲ್ಲಿ ಕಾರ್ಯರಂಭ ಮಾಡಲಾಗಿದೆ.
 • 2017ನೇ ಸಾಲಿನಲ್ಲಿ ಶ್ರೀನಿವಾಸಪುರದ ಪಣಸಮಾಕನಹಳ್ಳಿಯಲ್ಲಿ ಒಕ್ಕೂಟದ 10 ಎಕರೆ ಜಾಗದಲ್ಲಿ ” Automated Corrugated box Manufacturing unit ” ಗೆ ಶೀಲಾನ್ಯಾಸ ಮಾಡಲಾಯಿತು.
 • 2018ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರದ ಮೆಗಾಡೇರಿಯಲ್ಲಿ ಆಗಸ್ಟ್’2018ರ ಮಾಹೆಯಿಂದ ಯು.ಹೆಚ್.ಟಿ. ಹಾಲಿನ 180ಮಿಲಿ ಮತ್ತು 500ಮಿಲಿ ನೂತನ “ಫ್ಲೆಕ್ಸಿ ಪ್ಯಾಕ್” ಉತ್ಪಾದನೆ ಪ್ರಾರಂಭಿಸಲಾಗಿದ್ದು, ಪ್ರತಿ ನಿತ್ಯ 20 ಸಾವಿರ ಲೀ. ಹಾಲನ್ನು ಮಾರುಕಟ್ಟೆಗೆ ಒದಗಿಸಲಾಗುತ್ತಿದೆ.
 • 2018ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರದ ಮೆಗಾಡೇರಿಯಲ್ಲಿ ಆಗಸ್ಟ್’2018ರ ಮಾಹೆಯಿಂದ ಯು.ಹೆಚ್.ಟಿ. ಹಾಲಿನ 500 ಮಿಲಿ ಮತ್ತು 1000ಮಿಲಿ. “ಟೆಟ್ರಾ ಬ್ರಿಕ್” ಹಾಲಿನ ಉತ್ಪಾದನೆ ಪ್ರಾರಂಭಿಸಲಾಗಿದ್ದು, ಪ್ರತಿ ನಿತ್ಯ1.0 ಲಕ್ಷ ಲೀ. ಹಾಲನ್ನು ಮಾರುಕಟ್ಟೆಗೆ ಒದಗಿಸಲಾಗುತ್ತಿದೆ.
 • 2018ನೇ ಸಾಲಿನಲ್ಲಿ ನೆರೆಯ ಆಂದ್ರಪ್ರದೇಶ ರಾಜ್ಯದ ವಿಜಯವಾಡ ವ್ಯಾಪ್ತಿಯಲ್ಲಿ ನಂದಿನಿ ಹಾಲು ಮತ್ತು ಮೊಸರು ಕೊ-ಪ್ಯಾಕಿಂಗ್ ಮಾಡಿಸಿ ಮಾರಾಟ ಕೈಗೊಳ್ಳಲು ಕ್ರಮವಿಡಲಾಗಿದೆ.