ಯೂನಿಯನ್ ಬಗ್ಗೆ
GROWTH OF UNION | ||
1987-88 | 28 years of Dairying |
2015-16 |
460 | Functional DCS | 1,799 |
1,56,774 Kg/Day | Avg. Procurement /Day | 9,63059 Kgs/DaY |
Rs 3.50 | Procurement Price/kg |
Rs 26.05 |
Rs 8.6 Lakhs | Share Capital | Rs.3408.9 Lakhs |
Rs 0.00 | Turnover | Rs 1275 Crores |
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಾವುದೇ ಶಾಶ್ವತ ನದಿ-ನಾಲೆಗಳಿಲ್ಲದ ಬಯಲುಸೀಮೆ ಪ್ರದೇಶವಾಗಿದೆ. ಈ ಜಿಲ್ಲೆಗಳ ರೈತರು ಕೇವಲ ಮಳೆಯಾಶ್ರಿತ ಬೇಸಾಯ ಮಾಡುತ್ತಿರುವವರಾಗಿದ್ದು, ಇಂದು ಹೈನುಗಾರಿಕೆಯೆ ರೈತರ ಹಿತವನ್ನು ಕಾಪಾಡುತ್ತ್ತಿದೆ. ಕೋಲಾರ ಜಿಲ್ಲೆಯನ್ನು ಬೆಂಗಳೂರು ಒಕ್ಕೂಟದಿಂದ ಬೇರ್ಪಡಿಸಿ, ದಿನಾಂಕ: 27/03/1987 ರಂದು ಕೋಲಾರ ಒಕ್ಕೂಟವನ್ನು ನೊಂದಾಯಿಸಿ, ದಿನಾಂಕ: 01/04/1987 ರಿಂದ ಕಾರ್ಯಾಚರಣೆಯಲ್ಲಿರುತ್ತದೆ. ಒಕ್ಕೂಟದ ವ್ಯಾಪ್ತಿಯು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸೀಮಿತವಾಗಿದ್ದು ಎರಡು ಜಿಲ್ಲೆಗಳ 11 ತಾಲ್ಲೂಕುಗಳಲ್ಲಿನ 2919 ಗ್ರಾಮಗಳನ್ನು ಒಳಗೊಂಡಿರುತ್ತದೆ. ಒಕ್ಕೂಟ ಬೇರ್ಪಟ್ಟಾಗ ರೂ.8.56 ಲಕ್ಷಗಳ ಷೇರು ಬಂಡವಾಳ ವರ್ಗಾವಣೆಯಾಗಿದ್ದು, ಹಾಲಿ ಒಕ್ಕೂಟದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಸಂಗ್ರಹಿಸಿದ ಒಟ್ಟು ಷೇರು ಬಂಡವಾಳ 2018-19 ರ ಅಂತ್ಯಕ್ಕೆ ರೂ. 65.75 ಕೋಟಿಗಳಾಗಿರುತ್ತದೆ. ಕೋಮುಲ್ ಮುಖ್ಯಡೇರಿಯು 4.0 ಲಕ್ಷ ಲೀ. ಹಾಲಿನ ಸಂಸ್ಕರಣೆ ಸಾಮಥ್ರ್ಯಹೊಂದಿದ್ದು, ಚಿಂತಾಮಣಿ, ಸಾದಲಿ ಮತ್ತು ಗೌರಿಬಿದನೂರು ಪ್ರದೇಶಗಳಲ್ಲಿ ತಲಾ 1.0 ಲಕ್ಷ ಲೀ. ಸಂಸ್ಕರಣೆ ಸಾಮಥ್ರ್ಯದ ಶೀಥಲ ಕೇಂದ್ರಗಳನ್ನು ಹೊಂದಿರುತ್ತದೆ. ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಬಲ್ಕ್ ಮಿಲ್ಕ್ ಕೂಲರ್‍ಗಳನ್ನು ಅನುಷ್ಟಾನಗೊಳಿಸಿದ ಒಕ್ಕೂಟ ಮಾತ್ರವಲ್ಲದೇ ನಂದಿನಿ ಬ್ರ್ಯಾಂಡ್ ಅಡಿಯ ದೇಶಾದ್ಯಂತ ಮಾರಾಟವಾಗುತ್ತಿರುವ “ಗುಡ್‍ಲೈಫ್” ಹಾಲನ್ನು ಉತ್ಪಾದನೆ ಕೈಗೊಂಡ ಪ್ರಥಮ ಒಕ್ಕೂಟ ಕೋಮುಲ್ ಆಗಿರುತ್ತದೆ. ಹಾಗೂ 2010ರಲ್ಲಿ ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಬಳಿ 3.0 ಲಕ್ಷ ಲೀ. ಸಂಸ್ಕರಣಾ ಸಾಮಥ್ರ್ಯದ ನೂತನ “ಮೆಗಾಡೇರಿ” ಚಾಲನೆಗೊಂಡಿದ್ದು, ಈ ಘಟಕದಲ್ಲಿ ಯು.ಹೆಚ್.ಟಿ. ಫ್ಲೆಕ್ಸಿ ಪ್ಯಾಕ್ ಹಾಲು ಮತ್ತು ಪನ್ನೀರ್ ಉತ್ಪಾದನಾ ಘಟಕವನ್ನು ನಿರ್ಮಿಸಿದ್ದು ಗ್ರಾಹಕರಿಗೆ ವಿತರಣೆ ಮಾಡಲಾಗುತ್ತಿದೆ.
ಸದಸ್ಯತ್ವ:
ಆಗಸ್ಟ್ – 2020 ರ ಅಂತ್ಯಕ್ಕೆ ಒಕ್ಕೂಟದಲ್ಲಿ ಹಾಲಿ 2,94,087 ಸದಸ್ಯರು ನೊಂದಣಿಯಾಗಿದ್ದು, ಅವರಲ್ಲಿ 99,594 ಸಣ್ಣ ರೈತರು, 99,551 ಅತಿ ಸಣ್ಣ ರೈತರು, 54,146 ಭೂ ಕಾರ್ಮಿಕರು ಹಾಗೂ ಇತರರು 40,796 ಆಗಿದ್ದು, ಇದರಲ್ಲಿ 77,167 ಮಹಿಳಾ ಸದಸ್ಯರು ಮತ್ತು 45,725 ಹರಿಜನ, 30,237 ಗಿರಿಜನ ಮತ್ತು ಒಬಿಸಿ 1,807 ಸದಸ್ಯರಿರುತ್ತಾರೆ.
ಹಾಲು ಶೇಖರಣೆ :
2020-21 ರ ಸಾಲಿನ ಆಗಸ್ಟ್ – 2020 ರ ಮಾಹೆಯಲ್ಲಿ ಸರಾಸರಿ 10.35 ಲಕ್ಷ ಕೆ.ಜಿ. ಹಾಲು ಶೇಖರಣೆಯಾಗಿದ್ದು, 2019-20 ಅಂತ್ಯಕ್ಕೆ ಹಾಲು ಶೇಖರಣೆಯ ದಿನವಹಿ ವಾರ್ಷಿಕ ಸರಾಸರಿ 9.62 ಲಕ್ಷ ಕೆ.ಜಿ. ಇರುತ್ತದೆ.