ಜೀವನದಲ್ಲಿ ಸುಮಧುರ ಕ್ಷಣಗಳನ್ನು ಆಚರಿಸಲು, ಔತಣಕೂಟಕ್ಕೆ ಮೆರುಗು ತರಲು ಹಾಗೂ ಖುಷಿಯ ಸಂಭ್ರಮದಲ್ಲಿ ಪಾಲ್ಗೊಳ್ಳುವ ಬಂಧು-ಮಿತ್ರರಿಗೆ ಉಡುಗೊರೆಯಾಗಿ ನೀಡಲು ನಂದಿನಿ ಅಸಾರ್ಟ್ಟೆಡ್ ಸ್ವೀಟ್ ಗಿಫ್ಟ್ ಬಾಕ್ಸ್ ಬಳಸಬಹುದಾಗಿದೆ. 4 ಬಗೆಯ ಪ್ರೀಮಿಯಂ ಗುಣಮಟ್ಟದ ಸಿಹಿ ತಿನಿಸುಗಳನ್ನು ಒಳಗೊಂಡ ಈ ಬಾಕ್ಸ್ ಅನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.
1/2 ಕಿ.ಗ್ರಾಂ. ನ ಪ್ಯಾಕ್ ಲಭ್ಯ (ತಲಾ 125 ಗ್ರಾಂ ಮೈಸೂರು ಪಾಕ್, ಪ್ರೀಮಿಯಂ ಗೋಡಂಬಿ ಬರ್ಫಿ, ಡ್ರೈ ಫ್ರೂಟ್ ಬರ್ಫಿ ಹಾಗೂ ಕೋಕನಟ್ ಬರ್ಫಿ ಒಳಗೊಂಡಿರುತ್ತದೆ).
1 ಕಿ.ಗ್ರಾಂ. ನ ಪ್ಯಾಕ್ ಲಭ್ಯ (ತಲಾ 250 ಗ್ರಾಂ ಮೈಸೂರು ಪಾಕ್, ಪ್ರೀಮಿಯಂ ಗೋಡಂಬಿ ಬರ್ಫಿ, ಡ್ರೈ ಫ್ರೂಟ್ ಬರ್ಫಿ ಹಾಗೂ ಬೇಸನ್ ಲಾಡು ಒಳಗೊಂಡಿರುತ್ತದೆ).