ಡೈರಿ ವೈಟನರ್

ನಂದಿನಿ ಡೇರಿ ವೈಟ್ನರ್ನ್ನು ಪಾಶ್ಚರೀಕರಿಸಿದ ತಾಜಾ ಸಂಪೂರ್ಣ ಹಾಲಿನಲ್ಲಿ ಸಕ್ಕರೆಯನ್ನು ಬೆರೆಸಿ ವಿನೂತನ ಸ್ಪ್ರೇ ಡ್ರೈಯಿಂಗ್ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ. ಆದ್ದರಿಂದ ಸಂಪೂರ್ಣವಾಗಿ ಬಿಸಿ ನೀರು ಅಥವಾ ಉಗುರು ಬೆಚ್ಚನೆಯ ನೀರಿನಲ್ಲಿ ಸುಲಭವಾಗಿ ಕರಗುತ್ತದೆ. 3 1/2 ಟೇಬಲ್ ಚಮಚದಷ್ಟು ಡೇರಿ ವೈಟ್ನರ್ನ್ನು 180ಮಿ.ಲಿ. ಉಗುರು ಬೆಚ್ಚನೆಯ ನೀರಿನಲ್ಲಿ ಕರಗಿಸಿ ಶುದ್ಧ ಹಸುವಿನ ಹಾಲಿನ ರುಚಿಯುಳ್ಳ ಹಾಲು ಅಥವಾ ಚಹಾ/ಕಾಫಿ ತಯಾರಿಸಬಹುದಾಗಿದೆ.
20ಗ್ರಾಂ, 40ಗ್ರಾಂ, 200ಗ್ರಾಂ, 500ಗ್ರಾಂ ಹಾಗೂ 1ಕಿ.ಗ್ರಾಂ. ಮೆಟಲೈಸ್ಡ್ ಅಲ್ಯೂಮಿನಿಯಮ್ನಿಂದ ತಯಾರಾದ ಲ್ಯಾಮಿನೇಟೆಟ್ ಫಿಲ್ಮ್ಗಳು, 10ಕಿ.ಗ್ರಾಂ ಹೆಚ್.ಡಿ.ಪಿ.ಯಿ. ಕಂಟೇನರ್ ಗಳಲ್ಲಿ ಲಭ್ಯವಿದೆ.

<< return to products